Share this book with your friends

Meenina Hejje / ಮೀನಿನ ಹೆಜ್ಜೆ kavana sankalana

Author Name: Vidyaa Swaroopa | Format: Paperback | Genre : Poetry | Other Details

ಕೃತಿ ಚೌರ್ಯ..!!?

ಬರೆಯಬೇಕೆ೦ಬ ಅದಮ್ಯ ಉತ್ಸಾಹ ಒ೦ದೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಾಕು ಎನಿಸಿತ್ತು ಒಮ್ಮೆ. ನಿರರ್ಗಳವಾಗಿ ಪದ ಪು೦ಜಗಳನ್ನು ಹೊರಹೊಮ್ಮಿಸಿ ಬಹು ಒದುಗರ ಮನಮುಟ್ಟುವ೦ತೆ ಮಾಡುವುದು ಬರವಣೆಗೆಯ ಕನಿಷ್ಟ ಉದ್ದೇಶವಾಗಿರಬೇಕು ಎನಿಸಿತ್ತು ಮಗದೊಮ್ಮೆ. ತೋಚಿದ್ದನ್ನು ಗೀಚುವ ಮುನ್ನ ಸಾಗಿತ್ತು ಹೀಗೋ೦ದು ಯೋಚನಾ ಲಹರಿ. ಸೋಲೆ ಗೆಲುವಿನ ಮೆಟ್ಟಿಲುಗಳು ಎ೦ಬ೦ತೆ ಶತ ಪ್ರಯತ್ನದಿ೦ದ ಹರಸಾಹಸ ಪಟ್ಟು ಬರೆಯಲು ಕೂತರೆ,  ಏಲ್ಲದಕ್ಕಿ೦ತ ಭಿನ್ನವಾಗಿ ಯಾರು - ಬರೆದಿರದ, ತಿಳಿಯದ, ಗೊತ್ತಿಲ್ಲದ, ಪೂರ್ಣ ಸ್ವ೦ತಿಕೆಯ ವಿಷಯ ಆಯ್ಕೆ ಮಾಡುವುದು ಒ೦ದು ಹುಚ್ಚು ಕಲ್ಪನೆ ಅನಿಸಿತ್ತು ಮತ್ತೊಮ್ಮೆ. ಅಷ್ಟಕ್ಕು ನಾವು ತಿಳಿದದ್ದು, ಅ೦ದುಕೊ೦ಡಿದ್ದು, ಕಲಿತದ್ದು ಎಲ್ಲ ಎರವಲು ಜ್ನಾನವಲ್ಲವೆ ಎ೦ಬ ಜಿಜ್ನಾಸೆ. ನೋಡಿಯೊ, ಓದೀಯೊ, ಕೇಳಿಯೊ ಮತ್ತಿತರೆ ಇ೦ದ್ರಿಯಾನುಭವದ ಜ್ನಾನವನ್ನು ಹೊರತುಪಡಿಸಿ ಇ೦ದ್ರಿಯಾತೀತವಾದ ಸ್ವ೦ತಿಕೆ ಏನಿದೆ. ಇಷ್ಟಕ್ಕು, ಖಗೋಲ ವಿಜ್ನಾನದ ಪ್ರಕೃತಿ ನಿಯಮದ೦ತೆ ಏನನ್ನಾದುರು ಶೂನ್ಯದಿ೦ದ ಸೃಷ್ಟಿಸುವುದು ಅಥವ ಸ೦ಪೂರ್ಣವಾಗಿ ನಾಶಗೊಳಿಸುವುದು ಅಸಾಧ್ಯವಲ್ಲವೆ? ಹೆಚ್ಚೆ೦ದರೆ ವಸ್ತುವಿನ ಸ್ತಿತಿ ಬದಲಾವಣೆ ಮಾತ್ರ ಸಾಧ್ಯ. ನಮ್ಮೆಲ್ಲ ಚಿ೦ತನೆಗಳು ಕಲಿಕೆಯಿ೦ದಲೊ, ಪ್ರಕೃತಿಯಿ೦ದಲೊ,  ಪರಿಸರದಿ೦ದಲೊ, ಒ೦ದಲ್ಲ ಒ೦ದು ರೀತಿಯ ಅನುಭವದ ಪರೀಧಿಯಲ್ಲೆ ಪಡೆದುಕೊ೦ಡದ್ದನ್ನೊ ಬರೆಯುವುದಾದರೆ ಇದರಲ್ಲಿ ಸ್ವ೦ತದ್ದು ಅ೦ತ ಏನು ಬ೦ತು; ಹಾಗಿದ್ದರೆ ನಮ್ಮೆಲ್ಲ ಬರವಣಿಗೆ, ಮಾತು ಕತೆ, ಚಿ೦ತನೆಗಳು - ಕೃತಿ ಚೌರ್ಯವಲ್ಲದೆ ಮತ್ತೇನು..!!? 

Read More...
Paperback
Paperback 135

Inclusive of all taxes

Delivery

Item is available at

Enter pincode for exact delivery dates

Also Available On

ವಿದ್ಯಾ ಸ್ವರೂಪ

ನಾನ್ಯಾರು !?

ನಾನು ಇವರ ಮಗ, ಎಂದು, ತಂದೆ ಮತ್ತು ತಾಯಿಯ ಹೆಸರಿನ ಮೂಲಕ ನನ್ನ ಅಸ್ತಿತ್ವ ಸ್ಥಾಪಿಸಬಹುದು;

ನಾನು ಈ ಶಾಲೆಯ, ಕಾಲೇಜಿನ, ವಿಶ್ವವಿದ್ಯಾಲಯದ ವಿದ್ಯಾರ್ಥಿ, ಪದವೀದರ ಎಂದು ಹೇಳಿ ಪರೋಕ್ಷವಾಗಿ ಹೇಳುವುದಾದರೆ, ನನ್ನ ಸ್ವಂತಿಕೆ ಏನು ಎಂದು ಪ್ರಶ್ನೆ? 

ನಾನು ಇಂತಿಂತಹ ಸಂಸ್ಥೆಯ ಉದ್ಯೋಗಿ ಎನ್ನುವುದಾದರೆ, ಆ ಸಂಸ್ಥೆಯ ಹೆಸರು ಮತ್ತು ನನ್ನ ವೃತ್ತಿ, ಪೃವೃತ್ತಿಯ ಜೊತೆಗೆ ನನ್ನ ಹೆಸರನ್ನು ಹೊಂದಿಸಬೇಕಾದ ಪರಿಸ್ಥಿತಿ !!

ನನ್ನ ಹೆಸರು ನನ್ನದೇ ಸಾಧನೆ, ಕಾರ್ಯ, ಸಾಮಾಜಿಕ ಸೇವೆ ಮತ್ತಿತ್ತರೆಯ ನೆಲೆಗಟ್ಟಿನಲ್ಲಿ ಹೆಗ್ಗುರುತಾಗಿ, ಖಾಯಂ ಆಗಿ,  ಛಾಪು ಮೂಡಿಸಿ, ಎಲ್ಲರಿಗೂ ಚಿರಪರಿಚಿತವಾಗಿ ಉಳಿಯಬೇಕು. ಆಗಲೇ ಹೆಸರಿಗೊಂದು ನೆಲೆ, ಬೆಲೆ. 

ಅಲ್ಲಿಯವರೆಗೆ, ನಾನೊಬ್ಬ ಮತ್ತೊಬ್ಬರ, ಮತ್ತೊಂದರ ಹೆಸರಿನ ಮೂಲಕ ನನ್ನ ಹೆಸರನ್ನು ಅನಿವಾರ್ಯವಾಗಿ  ತಳುಕು ಹಾಕಿ ಗುರುತಿಸಿಕೊಳ್ಳಲೇ ಬೇಕಾದ ಕನಿಷ್ಟ ಸಾಮಾನ್ಯ ಮನುಷ್ಯ ಜೀವಿಯಲ್ಲವೆ ?

Read More...

Achievements

+5 more
View All